ಮೀ ಟೂ ‘ನಾನು ಕೂಡ’ ಎಂಬ ಅಭಿಯಾನ ಎರಡು ಅರ್ಥಗಳನ್ನು ಒಳಗೊಂಡಿವೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರಲ್ಲಿ ‘ನಾನು ಕೂಡ’ ಎಂಬುದೊಂದು; ಲೈಂಗಿಕ ಶೋಷಣೆಗೆ ಗುರಿಯಾದ ಹೆಣ್ಣಿಗೆ ‘ನಾನು ಕೂಡ ಬೆಂಬಲಿಗರಾಗಿರುತ್ತೇವೆ’ ಎನ್ನುವುದು ಮತ್ತೊಂದು. == ಪರಿಚಯ == ಪುರಾಣೇತಿಹಾಸದ ಕಾಲದಿಂದಲೂ ಮಹಿಳೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ತನ್ನೊಳಗೆ ಹೆಪ್ಪುಗಟ್ಟಿರುವ ಆಕ್ರೋಶ, ಮಡುಗಟ್ಟಿರುವ ವೇದನೆಗಳನ್ನು ಈ ದಿನಗಳಲ್ಲಿ ಹೊರಹಾಕುವ ದಿಟ್ಟತನ ತೋರುತ್ತಿದ್ದಾಳೆ. ಇಂದಿನ ಆಧುನಿಕ ದುಶ್ಯಾಸನ-ಕೀಚಕರಿಂದ ತಪ್ಪಿಸಿಕೊಳ್ಳಲು ಹೆಣಗುತ್ತಿದ್ದಾಳೆ. # ಮೀ ಟೂ ಎಂಬ ಅಭಿಯಾನದ ಮೂಲಕ ತನ್ನನ್ನು ಕಾಡುತ್ತಿರುವ ಮಾನಸಿಕ ಒತ್ತಡಗಳಿಂದ ಹೊರಬರಲು ಹವಣಿಸುತ್ತಿದ್ದಾಳೆ. ಲೈಂಗಿಕ ಶೋಷಣೆಗೆ ಗುರಿಯಾಗಿ ತನ್ನತನವನ್ನು ಕಳೆದುಕೊಳ್ಳುತ್ತಿರುವ ಹೆಣ್ಣಿಗೆ ಇದು ಆತ್ಮವಿಶ್ವಾಸ, ಧೈರ್ಯ, ಭರವಸೆಗಳನ್ನು ತುಂಬುತ್ತಿದೆ. ಇದರಿಂದ ಸಮಾಜದೊಳಗೆ ಒಂದು ಬಗೆಯ ಹೊಸ ಸಂಚಲನ ಶುರುವಾಗಿದೆ. == ಇತಿವೃತ್ತ == ಈ ಐತಿಹಾಸಿಕ ಚಳುವಳಿ ಸುಮಾರು 12 ವರ್ಷಗಳ ಹಿಂದೆಯೇ ಆರಂಭಗೊಂಡರೂ ಅದು ಆಮೆ ವೇಗದಲ್ಲಿತ್ತು. 2006ರಲ್ಲಿ ಆಫ್ರಿಕನ್ ಮೂಲದ ‘ತರಾನ್ ಬರ್ಕ್’ ಎಂಬ ಮಹಿಳೆ ನ್ಯೂಯಾರ್ಕ್‍ನಲ್ಲಿದ್ದು ನಾಗರಿಕ ಹಕ್ಕುಗಳ ಹೋರಾಟಗಾರ್ತಿಯಾಗಿ ಗುರ್ತಿಸಿಕೊಂಡು, ತನ್ನ ಸುತ್ತಲೂ ನಡೆಯುತ್ತಿದ್ದ ಲೈಂಗಿಕ ದೌರ್ಜನ್ಯವನ್ನು ನಿಯಂತ್ರಿಸಲು, ಮೊಟ್ಟ ಮೊದಲಿಗೆ # ಮೀ ಟೂ ಹ್ಯಾಶ್‍ಟ್ಯಾಗ್ ಪ್ರಾರಂಭಿಸಿದಳು. ಅಂದು ‘ಸಹಾನುಭೂತಿಯ ಮೂಲಕ ಮಹಿಳಾ ಸಬಲೀಕರಣ’ ಎಂಬ ಆಶಯದೊಂದಿಗೆ ಶುರುವಾದ ಈ ಅಭಿಯಾನ ಇಂದು ತೀವ್ರಗತಿಯನ್ನು ಪಡೆದುಕೊಂಡಿದೆ. ಳೆದ ವರ್ಷ ಅಕ್ಟೋಬರ್ 5ರಂದು ಹಾಲಿವುಡ್ ನಿರ್ದೇಶಕರೊಬ್ಬರ ಮೇಲೆ ‘ಅಲಿಯಾಸ್ ಮಿಲಾನೊ’ ಎಂಬ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಹ್ಯಾಶ್‍ಟ್ಯಾಗ್ ಬಳಸಿ #ಮೀ ಟೂ ಅಭಿಯಾನವನ್ನು ಚುರುಕುಗೊಳಿಸಿದಳು. ಈ ಅಭಿಯಾನ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಅನುಭವಿಸುತ್ತಿರುವ ಮಾನಸಿಕ, ದೈಹಿಕ ದೌರ್ಜನ್ಯವನ್ನು ಬಯಲು ಮಾಡಿ, ಉದ್ಯೋಗಸ್ಥ ಮಹಿಳೆಯರು ಅನುಭವಿಸುತ್ತಿರುವ ಮೂಕ ವೇದನೆಯನ್ನು ಜಗಜ್ಜಾಹೀರು ಪಡಿಸುವುದಾಗಿದೆ. == ವಾಸ್ತವ ಸಮಾಜದಲ್ಲಿ == ಭಾರತ ದೇಶದ ಗ್ರಾಮೀಣ ಪ್ರದೇಶದಲ್ಲಿ ‘ಸೋಷಿಯಲ್ ಮಿಡಿಯಾ’ ಎಂದರೆ ಏನೆಂದು ಗೊತ್ತಿರದ ಮುಗ್ದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರ ಮೇಲಾಗುತ್ತಿರುವ ಲೈಂಗಿಕ ಶೋಷಣೆ, ಮಾನಸಿಕ ಕಿರುಕುಳ, ಮಾನಭಂಗದಂತಹ ವಿಚಾರಗಳು ಬೆಳಕಿಗೆ ಬರುವುದೇ ಇಲ್ಲ. ಎಷ್ಟೋ ಮಹಿಳೆಯರಿಗೆ ಅವನ್ನು ಹೇಳಿಕೊಳ್ಳಲು ಸಾಧ್ಯವಾಗದೇ, ಆತ್ಮಹತ್ಯೆಯ ಮೊರೆ ಹೋಗಿದ್ದಾರೆ. ಬದುಕಿರುವಾಗ ಬೆಳಕಿಗೆ ಬರದ ಎಷ್ಟೋ ಘಟನೆಗಳು ಅವರು ಸತ್ತ ನಂತರ ಬೆಳಕಿಗೆ ಬಂದ ಉದಾಹರಣೆಗಳು ಸಾಕಷ್ಟಿವೆ. ಅಸಂಘಟಿತ ಕ್ಷೇತ್ರದಲ್ಲಿ ದುಡಿಯುತ್ತಿರುವ, ಸೇವಾ ಭದ್ರತೆಯೇ ಇಲ್ಲದ ಬಹುಸಂಖ್ಯಾತ ಮಹಿಳೆಯರಿಗೆ # ಮೀ ಟೂ ಭರವಸೆಯ ಬೆಳಕಾಗಬೇಕಿದೆ. ಭಾರತೀಯ ಸಮಾಜದಲ್ಲಿ ಮಹಿಳೆ ಎಲ್ಲಾ ಕ್ಷೇತ್ರಗಳಲ್ಲೂ, ಎಲ್ಲಾ ವರ್ಗಗಳಲ್ಲೂ, ಎಲ್ಲಾ ಸ್ತರಗಳಲ್ಲೂ ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗುತ್ತಿದ್ದಾಳೆ. ಕಾಯ್ದೆ, ಕಾನೂನು-ಕಟ್ಟಳೆಗಳೆಲ್ಲ ಉಳ್ಳವರ ಪಾಲಾಗುತ್ತಿವೆ. ಹೆಣ್ಣನ್ನು ಲೈಂಗಿಕವಾಗಿ ಶೋಷಿಸುವರಲ್ಲಿ ಬಹುತೇಕರು ವಿದ್ಯಾವಂತ ಪುರುಷರೇ ಆಗಿದ್ದಾ == ಉಲ್ಲೇಖಗಳು ==